ಒಳವಕ್ಕೋಡು: ಕೇರಳ ರಾಜ್ಯದ ಪಾಲ್ಘಾಟ್ ಜಿಲ್ಲೆಯಲ್ಲಿ ಪಾಲ್ಘಾಟಿನ ಉತ್ತರಕ್ಕೆ 4.8 ಕಿಮೀ ದೂರದಲ್ಲಿ ಕಣಿವೆಯಲ್ಲಿರುವ ಒಂದು ಸಣ್ಣ ಪಟ್ಟಣ. ದಕ್ಷಿಣ ರೈಲ್ವೆಯ ಒಳವಕ್ಕೋಡು ವಿಭಾಗದ ಕೇಂದ್ರ ಕಾರ್ಯಸ್ಥಾನ. ಮದ್ರಾಸು-ಮಂಗಳೂರು ಮಾರ್ಗವೂ ಪಾಲ್ಘಾಟ್ ಕವಲು ಮಾರ್ಗವೂ ಇಲ್ಲಿ ಸಂಧಿಸುತ್ತವೆ. ನೀರಾವರಿಯ ಉದ್ದೇಶದಿಂದ ನಿರ್ಮಿಸಲಾಗಿರುವ ಮಲಪುಷಾó ಕಟ್ಟೆ ಇರುವುದು ಇದರ ಬಳಿಯಲ್ಲೆ. ಒಳವಕ್ಕೋಡಿನಿಂದ ರೈಲಿನ ಮೂಲಕ ಹೆಂಚು, ಮರದ ದಿಮ್ಮಿ ಮುಂತಾದವು ಹೊರಕ್ಕೆ ಸಾಗುತ್ತವೆ.       (ಎನ್.ಎ.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ